Tuesday, July 3, 2018

Shocking News for Government Employees: If you have a BPL card, you have to pay a fine!


ಕಲಬುರಗಿ : ಸರ್ಕಾರಿ ನೌಕರರೇ ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇದ್ದರೆ ಬೀಳುತ್ತೇ ಭಾರಿ ದಂಡ. ಅಕ್ರಮವಾಗಿ ಬಿಪಿಎಲ್ ಪಡಿತರ ಪಡದುಕೊಂಡವರ ಮೇಲೆ ಆಹಾರ ಇಲಾಖೆಯು ಭಾರೀ ಬ್ರಹ್ಮಾಸ್ತ್ರ ಬೀಸಿದೆ.
ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಸರ್ಕಾರ ಬಿಪಿಎಲ್ ಕಾರ್ಡ್ ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ ಈ ಯೋಜನೆ ಅಂದುಕೊಂಡಂತೆ ಜಾರಿಯಾಗಲೇ ಇಲ್ಲ. ನಿಜವಾದ ಫಲಾನುಭವಿಗಳಿಗೆ ಯೋಜನೆಯ ಲಾಭ ಸಿಗದೇ ಸರ್ಕಾರಿ ನೌಕರರು ಇದನ್ನು ದುರಪಯೋಗ ಪಡಿಸಿಕೊಂಡಿದ್ದರು.
ಸರ್ಕಾರಿ ನೌಕರರು ನಕಲಿ ದಾಖಲೆಗಳನ್ನು ಆಹಾರ ಇಲಾಖೆಗೆ ಸಲ್ಲಿಸಿ, ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಳನ್ನು ಪಡೆದಿದ್ದರು. ರಾಜ್ಯಾದ್ಯಂತ ಸುಮಾರು 5, 160 ಸರ್ಕಾರಿ ನೌಕರರು, ವಾಮಮಾರ್ಗವಾಗಿ ಬಿಪಿಎಲ್ ಕಾರ್ಡ್ ಗಳನ್ನು ಪಡೆದಿದ್ದರು. ಸರ್ಕಾರಿ ನೌಕರರ ಮೇಲೆ ವ್ಯಾಪಕವಾಗಿ ದೂರು ಬಂದ ಹಿನ್ನೆಲೆಯಲ್ಲಿ ನಿಸ್ಪಕ್ಷವಾಗಿ ಕಾರ್ಯಾಚರಣೆಗಿಳಿದ ಆಹಾರ ಇಲಾಖೆ, 5,160 ಸರ್ಕಾರಿ ನೌಕರರು ಅಕ್ರಮವಾಗಿ ಬಿಪಿಎಲ್ ಕಾರ್ಡ್ ಗಳನ್ನು ಹೊಂದಿರುವುದು ಪತ್ತೆ ಮಾಡಿದೆ.
ಇಂತಹ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಂಡು ಸುಮಾರು 1. 73 ಕೋಟಿ ರೂಪಾಯಿಗೂ ಅಧಿಕ ದಂಡವನ್ನು ವಸೂಲಿ ಮಾಡಿ, ಅಕ್ರಮ ಬಿಪಿಎಲ್ ಕಾರ್ಡ್ ಗಳನ್ನು ವಶಪಡಿಸಿಕೊಂಡಿದೆ.
Kannada News.

No comments:

Post a Comment