Monday, July 2, 2018

ಪಾನ್ ಕಾರ್ಡ್ ದಾರರಿಗೆ ಖುಷಿ ಸುದ್ದಿ ನೀಡಿದ ಆದಾಯ ತೆರಿಗೆ ಇಲಾಖೆ.

ಪಾನ್ ಕಾರ್ಡ್ ಜೊತೆ ಆಧಾರ್ ಲಿಂಕ್ ಮಾಡದವರಿಗೊಂದು ಖುಷಿ ಸುದ್ದಿ. ಪಾನ್ ಕಾರ್ಡ್ ಆಧಾರ್ ಜೊತೆ ಲಿಂಕ್ ಮಾಡಲು ಇನ್ನೂ ಸಮಯವಿದೆ. ಆಧಾರ್ ಜೊತೆ ಪಾನ್ ಕಾರ್ಡ್ ಲಿಂಕ್ ಮಾಡುವ ಸಮಯದ ಗಡಿಯನ್ನು ವಿಸ್ತರಿಸಲಾಗಿದೆ. ಐದನೇ ಬಾರಿ ಆದಾಯ ತೆರಿಗೆ ಇಲಾಖೆ ಪಾನ್ ಜೊತೆ ಆಧಾರ್ ಲಿಂಕ್ ದಿನಾಂಕವನ್ನು ವಿಸ್ತರಿಸಿದೆ.

2019 ಮಾರ್ಚ್ 31ರವರೆಗೆ ಆಧಾರ್ ಜೊತೆ ಪಾನ್ ಲಿಂಕ್ ಗೆ ಅವಕಾಶವಿದೆ. ಪಾನ್ ಜೊತೆ ಆಧಾರ್ ಲಿಂಕ್ ಮಾಡುವ ಬಗ್ಗೆ ಚರ್ಚೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆಧಾರ್ ಜೊತೆ ಪಾನ್ ಲಿಂಕ್ ಮಾಡಲು Incometaxindiaefiling ವೆಬ್ಸೈಟ್ ಕ್ಲಿಕ್ ಮಾಡಬೇಕು. ಅಲ್ಲಿ ಆಧಾರ್ ನಂಬರ್ ಜೊತೆ ಪಾನ್ ಲಿಂಕ್ ಮಾಡಬಹುದು.

ಎಸ್ಎಂಎಸ್ ಮೂಲಕ ಕೂಡ ಆದಾರ್ ನಂಬರ್ ಲಿಂಕ್ ಮಾಡಲು ಅವಕಾಶ ನೀಡಲಾಗಿದೆ. 567678 ಅಥವಾ 56161 ಎಸ್ಎಂಎಸ್ ಮಾಡಿ ಆಧಾರ್ ಲಿಂಕ್ ಮಾಡಬಹುದು.

No comments:

Post a Comment