Thursday, July 12, 2018

Application invitation for Village Accounts Officer in Revenue Department

ಕಂದಾಯ ಇಲಾಖೆಯಲ್ಲಿ ಗ್ರಾಮಲೆಕ್ಕಿಗರ ಹುದ್ದೆಗಳ ನೇಮಕಾತಿ ಗೆ ಅರ್ಜಿ.ಕರ್ನಾಟಕ ಕಂದಾಯ ಇಲಾಖೆಯ ಬೀದರ್ ಜಿಲ್ಲಾಧಿಕಾರಿಗಳ ಕಚೇರಿಯು ಗ್ರಾಮಲೆಕ್ಕಿಗರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 53
ಹುದ್ದೆಗಳ ವಿವರ
ಗ್ರಾಮಲೆಕ್ಕಿಗರ ಹುದ್ದೆ – 53 (ಹೈಕ – 42)
ವಿದ್ಯಾರ್ಹತೆ :
ದ್ವಿತೀಯ ಪಿ.ಯು.ಸಿ ಪಾಸಾಗಿರಬೇಕು. ಇಲ್ಲದಿದ್ದಲ್ಲಿ ಸಿಬಿಎಸ್’ಸಿ, ಐಸಿಎಸ್’ಸಿ ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ, ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗಕ್ಕೆ 35 ವರ್ಷ, 2ಎ, 2ಬಿ, 3ಎ, 3ಬಿ ವರ್ಗದವರಿಗೆ 38 ವರ್ಷ ಹಾಗೂ ಪ್ರವರ್ಗ1, ಪ.ಜಾ, ಪ.ಪಂ ದವರಿಗೆ 40 ವರ್ಷ ನಿಗದಿ ಪಡಿಸಲಾಗಿದೆ.
ಶುಲ್ಕ : ಸಾಮಾನ್ಯ ಮತ್ತು ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ 200 ರೂ, ಪ್ರವರ್ಗ1, ಪ.ಜಾ, ಪ.ಪಂ, ಮಹಿಳೆ ಅಭ್ಯರ್ಥಿಗಳಿಗೆ 100 ರೂ ಶುಲ್ಕ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :  10-08-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ
http://bidar.nic.in    ಅಥವಾ http://bidar-va.kar.nic.in  ಗೆ ಭೇಟಿ ನೀಡಿ.

No comments:

Post a Comment