Saturday, July 14, 2018

Application invitation for recruitment of various posts in NIMANS.

ನಿಮಾನ್ಸ್’ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮಾನ್ಸ್) ಯು ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅಂಚೆ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ಸಂಖ್ಯೆ : 6
ಹುದ್ದೆಗಳ ವಿವರ
1.ಕಿರಿಯ ವೈಜ್ಞಾನಿಕ ಅಧಿಕಾರಿ– 01
2.ಫೀಲ್ಡ್ ಇನ್ಫರ್ಮೆಷನ್ ಆಫೀಸರ್ -03
3.ಡಾಟಾ ಮ್ಯಾನೇಜರ್ – 02
ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗೆ ಸಾರ್ವಜನಿಕ ಆರೋಗ್ಯ ವಿಷಯದಲ್ಲಿ ಸ್ನಾತಕೋತ್ತರ, ಎಂಎಸ್ಸಿ ಹೆಲ್ತ್ ಮ್ಯಾನೇಜ್’ಮೆಂಟ್, ಬಯೋ ಸ್ಟ್ಯಾಟಿಸ್ಟಿಕ್ಸ್, ಎಂ.ಡಿ , ಎಂಬಿಬಿಎಸ್, ಕ್ರ.ಸಂ 2ರ ಹುದ್ದೆಗೆ ಸಮಾಜ ವಿಜ್ಞಾನ (ಸಾಮಾಜೀಕ ಕಾರ್ಯ, ಸಮಾಜಶಾಸ್ತ್ರ, ಮನಶಾಸ್ತ್ರ, ಅರ್ಥಶಾಸ್ತ್ರ) ಕ್ರ.ಸಂ 3ರ ಹುದ್ದೆಗೆ ಎಂಎಸ್ಸಿ ಬಯೋ ಸ್ಟ್ಯಾಟಿಸ್ಟಿಕ್ಸ್, ಎಂಸಿಎ ಪದವಿ ಪಡೆದಿರಬೇಕು.
ವಯೋಮಿತಿ : ಎಲ್ಲಾ ಹುದ್ದೆಗಳಿಗೂ 40 ವರ್ಷದೊಳಗಿರಬೇಕು.
ಶುಲ್ಕ : ಪ.ಜಾ, ಪ.ಪಂಗಡ ವರ್ಗದವರಿಗೆ 295 ರೂ, ಸಾಮಾನ್ಯ ಮತ್ತು ಹಿಂದುಳಿದ ವರ್ಗದವರಿಗೆ 590 ರೂ ಶುಲ್ಕ ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ : ದಿ ರಿಜಿಸ್ಟರ್, ನಿಮಾನ್ಸ್, ಅಂಚೆ ಪೆಟ್ಟಿಗೆ ಸಂಖ್ಯೆ 2900, ಹೊಸೂರು ರಸ್ತೆ, ಬೆಂಗಳೂರು – 560029 ಇಲ್ಲಿಗೆ ಸಲ್ಲಿಸುವಂತೆ ತಿಳಿಸಿದೆ.
ಅರ್ಜಿ ಸಲ್ಲಿಸಲು ಕಡೆಯ ದಿನಾಂಕ :  31-07-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ಪಡೆಯಲು ವೆಬ್ ಸೈಟ್ ವಿಳಾಸ www.nimhans.ac.in  ಗೆ ಭೇಟಿ ನೀಡಿ.

No comments:

Post a Comment